Skip to main content

Posts

Showing posts from January, 2022

ಓದು ಕರ್ನಾಟಕ ಕಾರ್ಯಕ್ರಮ

 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೀರಾಪುರ ಓದು ಕರ್ನಾಟಕ ಕಾರ್ಯಕ್ರಮದ ಪ್ರಾರಂಭ ಒಂದನೇ ದಿನ ಇಂದು ದಿನಾಂಕ 6 ಜನವರಿ 2022 4 ಮತ್ತು 5ನೇ ತರಗತಿ ಮಕ್ಕಳಿಗೆ ಓದು ಕರ್ನಾಟಕ ಅಭ್ಯಾಸ ಪುಸ್ತಕದ ಪ್ರಾರಂಭಿಕ ಪರೀಕ್ಷೆಗಳನ್ನು ಮೌಖಿಕವಾಗಿ ಮಾಡಲಾಯಿತು ಮತ್ತು ಓದು ಕರ್ನಾಟಕ ಕಾರ್ಯಕ್ರಮದ ಪರಿಚಯ ಮಾಡಿಕೊಡಲಾಯಿತು ಮಕ್ಕಳು ಪ್ರತಿನಿತ್ಯ ಶಾಲೆಗೆ ತಪ್ಪದೆ ಹಾಜರಾಗುವಂತೆ ಸೂಚಿಸಲಾಯಿತು

ಆಯುಷ್ಮಾನ್ ಭಾರತ ಶಾಲಾ ಮಕ್ಕಳ ಆರೋಗ್ಯ ಮತ್ತು ಕ್ಷೇಮ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ ವಿವರ

 ಆಯುಷ್ಮಾನ್ ಭಾರತ ಶಾಲಾ ಮಕ್ಕಳ ಆರೋಗ್ಯ ಮತ್ತು ಕ್ಷೇಮ ತರಬೇತಿಯನ್ನು ಶಾಲಾ ಶಿಕ್ಷಕರಿಗೆ ಡಿಸೆಂಬರ್ ತಿಂಗಳಲ್ಲಿ ನೀಡಲಾಯಿತು ಇಲ್ಲಿ 11 ಮೊಡ್ಯುಲ್ಗಳ ಕರಿತು ಶಿಕ್ಷಕರೊಂದಿಗೆ ಚರ್ಚಿಸಲಾಯಿತು ಮೌಲ್ಯ ಮತ್ತು ಜವಾಬ್ದಾರಿಯುತ ನಾಗರಿಕ ಎನ್ನುವ ವಿಷಯದ ಕುರಿತು ಶಿಕ್ಷಕರೊಂದಿಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಮೌಲ್ಯ ಎಂದರೇನು? ಮೌಲ್ಯದ ಅರ್ಥ, ವ್ಯಾಖ್ಯಾನಗಳು, ಯಾವುದು ಮೌಲ್ಯ ವಲ್ಲ, ಮೌಲ್ಯಗಳ ಉದಾಹರಣೆ, ನಿತ್ಯ ಜೀವನದಲ್ಲಿ ಮೌಲ್ಯಗಳ ಸಂದಿಗ್ಧತೆ, ಸಮಸ್ಯೆ ಪರಿಹಾರ ಮಾಡುವುದು ಹೇಗೆ? ಸಮಸ್ಯೆ ಪರಿಹಾರದಲ್ಲಿ ನ ಹಂತಗಳು ಅಂಗವಿಕಲತೆಯ ಬಗ್ಗೆ ಇತ್ಯಾದಿ ವಿಷಯಗಳನ್ನು ಈ ಮೊಡ್ಯುಲ್ ಅಲ್ಲಿ ಚರ್ಚಿಸಲಾಯಿತು